kn_obs-tn/content/02/01.md

1.6 KiB

ತೋಟ

ಇದು ಆದಮ ಮತ್ತು ಹವ್ವಳಿಗೆ ಆನಂದಿಸಲು ಮತ್ತು ತಿನ್ನಲು ದೇವರು ಸಿದ್ಧಪಡಿಸಿದಂಥ ಮರಗಳ ಮತ್ತು ಸಸ್ಯಗಳ ವಿಶೇಷವಾದ ತೋಟ. ಇದು 01:11 ರಲ್ಲಿ ಬಳಸಲಾದ ಅದೇ ಪದವಾಗಿರಬೇಕು. ನೀವು ಇದನ್ನು ಹೇಗೆ ಭಾಷಾಂತರಿಸಬೇಕೆಂದು ಅದರಲ್ಲಿ ನೋಡಿರಿ.

ದೇವರೊಂದಿಗೆ ಮಾತನಾಡಿದರು

"ಮಾತು" ಎಂಬ ಪದವನ್ನು ಮನುಷ್ಯರೊಂದಿಗೆ ಮಾತಾಡುವುದನ್ನು ಸೂಚಿಸಲು ಬಳಸುವಂಥ ಪದವೇ ಆಗಿರಬೇಕು. ಪುರುಷ ಮತ್ತು ಸ್ತ್ರೀಯೊಂದಿಗೆ ಮಾತನಾಡಲು ದೇವರು ಶಾರೀರಿಕ ರೂಪವನ್ನು ಧರಿಸಿಕೊಂಡಿರಬಹುದು, ಏಕೆಂದರೆ ವಾಕ್ಯಭಾಗವು ಅವರು ಮುಖಾಮುಖಿಯಾಗಿ ಮಾತನಾಡುತ್ತಿದ್ದರು ಎಂದು ಸೂಚಿಸುತ್ತದೆ.

ನಾಚಿಕೆ.

ನಾವು ಪಾಪ ಮಾಡಿದ್ದೇವೆ ಅಥವಾ ನಾವು ತಪ್ಪು ಮಾಡಿದ್ದೇವೆ ಎಂದು ತಿಳಿದುಕೊಳ್ಳುವುದರಿಂದ ಉಂಟಾಗುವಂಥ ಭಾವನೆ.

ಅನುವಾದದ ಪದಗಳು