kn_obs-tn/content/01/16.md

2.5 KiB

ಏಳನೆಯ ದಿನ

ಇದು ಆರು ದಿನಗಳ ಸೃಷ್ಟಿಯ ಕಾರ್ಯವು ಪೂರ್ಣಗೊಂಡ ದಿನದ ಮರುದಿನವಾಗಿದೆ.

ತನ್ನ ಕಾರ್ಯವನ್ನು ಮುಗಿಸಿದನು

ನಿರ್ದಿಷ್ಟವಾಗಿ, ದೇವರು ಸೃಷ್ಟಿಯ ಕಾರ್ಯವನ್ನು ಮುಗಿಸಿದನು. ಆತನು ಇನ್ನೂ ಇತರ ಕೆಲಸಗಳನ್ನು ಮಾಡುತ್ತಿದ್ದಾನೆ.

ದೇವರು ವಿಶ್ರಮಿಸಿಕೊಂಡನು

ಸೃಷ್ಟಿಕಾರ್ಯವು ಪೂರ್ಣಗೊಂಡ ಕಾರಣ ದೇವರು ಕೆಲಸ ಮಾಡುವುದನ್ನು ನಿಲ್ಲಿಸಿದನು ಎಂಬ ಅರ್ಥದಲ್ಲಿ ದೇವರು "ವಿಶ್ರಮಿಸಿಕೊಂಡನು" ಎಂದು ಹೇಳಲಾಗಿದೆ. ದೇವರಿಗೆ ದಣಿವಾಗಿರಲಿಲ್ಲ, ಅಥವಾ ಅದನ್ನು ಮುಂದುವರೆಸಲು ದೇವರು ಅಶಕ್ತನಾಗಿರಲಿಲ್ಲ.

ಏಳನೆಯ ದಿನವನ್ನು ಆಶೀರ್ವದಿಸಿದನು

ದೇವರು ಏಳನೆಯ ದಿನಕ್ಕೆ ಮತ್ತು ಪ್ರತಿ ಏಳನೇ ದಿನವೂ ಅನುಸರಿಸಬೇಕಾದ ಒಂದು ವಿಶೇಷ, ಸಕಾರಾತ್ಮಕ ಯೋಜನೆಯನ್ನು ಹೊಂದಿದ್ದನು, ಹೇಳಿದನು.

ಪರಿಶುದ್ಧ ದಿನವಾಗಿ ಮಾಡಿದನು

ಅಂದರೆ ದೇವರು ಈ ದಿನವನ್ನು ವಿಶೇಷ ದಿನವಾಗಿ "ಪ್ರತ್ಯೇಕಿಸಿದನು". ವಾರದ ಇತರ ಆರು ದಿನಗಳ ರೀತಿಯಲ್ಲಿಯೇ ಇದನ್ನು ಉಪಯೋಗಿಸಬಾರದು.

ವಿಶ್ವ

ಇದು ದೇವರು ಭೂಮಿಯ ಮೇಲೆ ಮತ್ತು ಆಕಾಶದಲ್ಲಿ ಸೃಷ್ಟಿಸಿದ ಎಲ್ಲವನ್ನೂ ಅಂದರೆ ದೃಶ್ಯ ಮತ್ತು ಅದೃಶ್ಯವಾದ ವಸ್ತುಗಳೆರಡನ್ನೂ ಒಳಗೊಂಡಿದೆ.

ಸತ್ಯವೇದದ ಕಥೆ

ಸತ್ಯವೇದದ ಕೆಲವು ಭಾಷಾಂತರಗಳಲ್ಲಿ ಈ ಉಲ್ಲೇಖಗಳು ಸ್ವಲ್ಪ ವ್ಯತ್ಯಾಸವಾಗಿರುತ್ತವೆ.

ಅನುವಾದದ ಪದಗಳು