kn_obs-tn/content/01/15.md

2.0 KiB

ದೇವರು ಉಂಟುಮಾಡಿದನು

ದೇವರು ಪುರುಷನನ್ನು ಮತ್ತು ಸ್ತ್ರೀಯನ್ನು ಅತ್ಯಂತ ವೈಯಕ್ತಿಕವಾದ ರೀತಿಯಲ್ಲಿ ರೂಪಿಸಿದನು.

ತನ್ನ ಸ್ವಂತ ಸ್ವರೂಪದಲ್ಲಿ

ಸ್ವರೂಪವು ಯಾರೋ ಒಬ್ಬನ ಅಥವಾ ಯಾವುದಾದರೂ ಒಂದರ ಶಾರೀರಿಕ ಪ್ರತಿರೂಪವಾಗಿದೆ. ದೇವರು ತನ್ನ ಕೆಲವೊಂದು ಗುಣಲಕ್ಷಣಗಳನ್ನು ಅಥವಾ ಸ್ವಭಾವಗಳನ್ನು ನಾವು ಪ್ರದರ್ಶಿಸುವ ಅಥವಾ ಪ್ರತಿನಿಧಿಸುವ ರೀತಿಯಲ್ಲಿ ಮನುಷ್ಯರಾದ ನಮ್ಮನ್ನು ಉಂಟುಮಾಡಿದ್ದಾನೆ, ಆದರೆ ಆತನಿಗೆ ಸರಿಸಮಾನರಾಗಿ ನಮ್ಮನ್ನು ಉಂಟುಮಾಡಿಲ್ಲ.

ಬಹು ಒಳ್ಳೆಯದು

"ಅದು ಒಳ್ಳೆಯದಾಗಿತ್ತು" ಎಂಬ ಹಿಂದಿನ ದಿನಗಳಲ್ಲಿನ ಹೇಳಿಕೆಗಳಿಗಿಂತ ಇದು ಹೆಚ್ಚು ಉತ್ಕಟವಾದದ್ದು. "ಬಹು ಒಳ್ಳೆಯದು" ಎಂಬ ಹೇಳಿಕೆ ಕೇವಲ ಪುರುಷ ಮತ್ತು ಸ್ತ್ರೀಯರಿಗೆ ಮಾತ್ರವಲ್ಲ, ಆದರೆ ಸರ್ವ ಸೃಷ್ಟಿಗೆ ಅನ್ವಯವಾಗುತ್ತದೆ. ದೇವರು ಉದ್ದೇಶಿಸಿದಂತೆಯೇ ಎಲ್ಲವೂ ಸರಿಯಾಗಿತ್ತು.

ಸೃಷ್ಟಿ

ಅಸ್ತಿತ್ವದಲ್ಲಿರುವ ಎಲ್ಲವನ್ನೂ ದೇವರು ಉಂಟುಮಾಡಿದಂಥ ಆರು ದಿನಗಳ ಕಾಲಾವಧಿಯಾಗಿದೆ.

ಅನುವಾದದ ಪದಗಳು