kn_obs-tn/content/01/10.md

3.9 KiB

ಸ್ವಲ್ಪ ಮಣ್ಣನ್ನು ತೆಗೆದುಕೊಂಡು

ದೇವರು ಮನುಷ್ಯನನ್ನು ನೆಲದ ಧೂಳಿನಿಂದ ಅಥವಾ ಒಣ ಮಣ್ಣಿನಿಂದ ಉಂಟುಮಾಡಿದನು. ಬಹುಶಃ ಈ ಪದವು ಭೂಮಿಗೆ ಬಳಸಿರುವ ಸಾಮಾನ್ಯ ಪದಕ್ಕಿಂತ ವಿಭಿನ್ನವಾಗಿರಬೇಕು.

ಅವನನ್ನು ರೂಪಿಸಿದನು

ಒಬ್ಬ ವ್ಯಕ್ತಿಯು ತನ್ನ ಕೈಗಳಿಂದ ಏನನ್ನಾದರೂ ಹೇಗೆ ರೂಪಿಸುತ್ತಾನೆ ಎಂಬುದಕ್ಕೆ ಹೋಲಿಸಿ, ದೇವರು ವೈಯಕ್ತಿಕವಾಗಿ ಮನುಷ್ಯನನ್ನು ರೂಪಿಸಿದನೆಂದು ಈ ಪದವು ವ್ಯಕ್ತಪಡಿಸುತ್ತದೆ. "ಸೃಷ್ಟಿಸು" ಎಂಬ ಪದಕ್ಕಿಂತ ವಿಭಿನ್ನವಾದ ಪದವನ್ನು ಬಳಸಿರಿ. ಸರಳವಾದ ಬಾಯಿಮಾತಿನ ಆಜ್ಞೆಯ ಮೂಲಕ ಆತನು ಬೇರೆಲ್ಲವನ್ನೂ ಸೃಷ್ಟಿಸಿದಕ್ಕಿಂತ ಇದು ಬಹಳ ವಿಭಿನ್ನವಾಗಿದೆ ಎಂಬುದನ್ನು ಗಮನಿಸಬೇಕು.

ಮನುಷ್ಯ/ಪುರುಷ

ಈ ಸಮಯದಲ್ಲಿ ಕೇವಲ ಮನುಷ್ಯನನ್ನು/ಪುರುಷನನ್ನು ಮಾತ್ರವೇ ಸೃಷ್ಟಿಸಲಾಗಿತ್ತು; ಸ್ತ್ರೀಯನ್ನು ನಂತರದಲ್ಲಿ ವಿಭಿನ್ನವಾದ ರೀತಿಯಲ್ಲಿ ಸೃಷ್ಟಿಸಲಾಯಿತು.

ಜೀವಶ್ವಾಸವನ್ನು ಊದಿದನು

ದೇವರು ಜೀವಶ್ವಾಸವನ್ನು ತನ್ನಿಂದ ಆದಾಮನ ಶರೀರದೊಳಕ್ಕೆ ವರ್ಗಾಯಿಸಿದಂಥ ಆತನ ವೈಯುಕ್ತಿಕವಾದ, ಅನ್ಯೋನ್ಯವಾದ ಕ್ರಿಯೆಯನ್ನು ಈ ನುಡಿಗುಚ್ಚ ವ್ಯಕ್ತಪಡಿಸುತ್ತದೆ, ಇದನ್ನು ಮನುಷ್ಯನು ಉಸಿರಾಡುವ ರೀತಿಗೆ ಹೋಲಿಸಲಾಗಿದೆ.

ಜೀವ/ಶ್ವಾಸ

ಈ ಕ್ರಿಯೆಯಲ್ಲಿ, ದೇವರು ಶಾರೀರಿಕವಾದ ಮತ್ತು ಆತ್ಮೀಕವಾದ ಜೀವಶ್ವಾಸವನ್ನು ಮನುಷ್ಯನೊಳಕ್ಕೆ ಊದಿದನು.

ಆದಾಮ

ಆದಾಮ ಎಂಬ ಹೆಸರು ಹಳೆಯ ಒಡಂಬಡಿಕೆಯಲ್ಲಿ “ಮನುಷ್ಯ” ನಿಗೆ ಬಳಸಿರುವಂಥ ಪದವಾಗಿದೆ, ಇದು “ಮಣ್ಣಿಗೆ” ಸಮಾನವಾದ ಪದವಾಗಿದೆ, ಆ ಮಣ್ಣಿನಿಂದಲೇ ಅವನು ರೂಪಿಸಲ್ಪಟ್ಟನು.

ಉದ್ಯಾನವನ

ಒಂದು ನಿರ್ದಿಷ್ಟ ಉದ್ದೇಶದ ನಿಮಿತ್ತವಾಗಿ ಮರಗಳನ್ನು ಮತ್ತು ಸಸ್ಯಗಳನ್ನು ನೆಡಲಾಗಿರುವಂಥ ಪ್ರದೇಶವಾಗಿದೆ - ಸಾಮಾನ್ಯವಾಗಿ ಆಹಾರವನ್ನು ಉತ್ಪಾದಿಸಲು ಅಥವಾ ಸೌಂದರ್ಯವನ್ನು ಒದಗಿಸಲು ಇರುವಂಥ ಪ್ರದೇಶವಾಗಿದೆ.

ಅದನ್ನು ಕಾಯುವುದಕ್ಕೆ/ನೋಡಿಕೊಳ್ಳುವುದಕ್ಕೆ

ವ್ಯವಸಾಯ ಮಾಡುವುದು, ಕಳೆ ಕೀಳುವುದು, ನೀರುಹಾಕುವುದು, ಕೊಯ್ಲು ಮಾಡುವುದು, ನೆಡುವುದು ಇತ್ಯಾದಿಗಳನ್ನು ಮಾಡುವುದರ ಮೂಲಕ ತೋಟವನ್ನು ನೋಡಿಕೊಳ್ಳುವುದಾಗಿದೆ.

ಅನುವಾದದ ಪದಗಳು