kn_obs-tn/content/01/09.md

3.5 KiB

ನಾವು ಉಂಟುಮಾಡೋಣ

ನಿರ್ದಿಷ್ಟವಾದ ಉದ್ದೇಶಕ್ಕಾಗಿ ನಿರ್ದಿಷ್ಟವಾದ ರೀತಿಯಲ್ಲಿ ಮನುಷ್ಯನನ್ನು ಸೃಷ್ಟಿಸುವಂಥ ದೇವರ ಉದ್ದೇಶಪೂರ್ವಕವಾದ, ಇಚ್ಛಾಪೂರ್ವಕವಾದ ನಿರ್ಧಾರವನ್ನು ಇದು ಸೂಚಿಸುತ್ತದೆ. ನೀವು ಇದನ್ನು, "ನಾವು ಉಂಟುಮಾಡೋಣ" ಎಂದು ಅನುವಾದಿಸಬಹುದು.

ನಮಗೆ...ನಮ್ಮ...ನಮಗೆ

ದೇವರು ಒಬ್ಬನೇ ಎಂದು ಸತ್ಯವೇದವು ಬೋಧಿಸುತ್ತದೆ, ಆದರೆ ಹಳೆಯ ಒಡಂಬಡಿಕೆಯಲ್ಲಿರುವ "ದೇವರು" ಎಂಬ ಪದವು ಬಹುವಚನದ ರೂಪವಾಗಿದೆ, ಮತ್ತು ದೇವರು ತನ್ನೊಂದಿಗೆ ತಾನು ಮಾತನಾಡುವಾಗ ಬಹುವಚನ, ಸರ್ವನಾಮಗಳನ್ನು ಉಪಯೋಗಿಸುತ್ತಾನೆ. ಕೆಲವರು ಇದನ್ನು ದೇವರ ಪ್ರಭಾವವನ್ನು ವ್ಯಕ್ತಪಡಿಸುವಂಥ ವಿಶೇಷವಾದ ರೀತಿಯಲ್ಲಿ ಮಾತನಾಡುವುದಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಇತರರು ಇದನ್ನು ತಂದೆಯಾದ ದೇವರು ದೇವರಾಗಿರುವ ಮಗನೊಂದಿಗೆ ಮತ್ತು ಪವಿತ್ರಾತ್ಮನೊಂದಿಗೆ ಮಾತನಾಡುವುದಾಗಿ ಅರ್ಥಮಾಡಿಕೊಳ್ಳುತ್ತಾರೆ.

ನಮ್ಮ ಸ್ವರೂಪದಲ್ಲಿ

ಸ್ವರೂಪವು ಯಾರೋ ಒಬ್ಬನ ಅಥವಾ ಯಾವುದಾದರೂ ಒಂದರ ಶಾರೀರಿಕ ಪ್ರತಿರೂಪವಾಗಿದೆ. ದೇವರ ಕೆಲವೊಂದು ಗುಣಲಕ್ಷಣಗಳನ್ನು ಅಥವಾ ಸ್ವಭಾವಗಳನ್ನು ನಾವು ಪ್ರದರ್ಶಿಸುವ ಅಥವಾ ಪ್ರತಿನಿಧಿಸುವ ರೀತಿಯಲ್ಲಿ ಮನುಷ್ಯರಾದ ನಮ್ಮನ್ನು ಉಂಟುಮಾಡಲಾಗಿದೆ.

ನಮ್ಮತೆ

ಮನುಷ್ಯರು ದೇವರ ಕೆಲವೊಂದು ಗುಣಲಕ್ಷಣಗಳನ್ನು ಹೊಂದಿದ್ದಾರೆ, ಆದರೆ ಆತನ ಎಲ್ಲಾ ಗುಣಲಕ್ಷಣಗಳನ್ನು ಹೊಂದಿಲ್ಲ. ಮನುಷ್ಯನು ದೇವರೊಂದಿಗೆ ಹೋಲಿಕೆಯುಳ್ಳವನಾಗಿದ್ದಾನೆಂದು ತೋರಿಸುವಂಥ ಪದಗಳಲ್ಲಿ ಈ ನುಡಿಗಟ್ಟನ್ನು ಅನುವಾದಿಸಬೇಕೆ ಹೊರತು, ಆತನೊಂದಿಗೆ ಸರಿಸಮಾನಾಗಿ ಅಥವಾ ಆತನಂತೆಯೇ ಎಂದು ಅನುವಾದಿಸಬಾರದು.

ದೊರೆತನ/ಅಧಿಕಾರ

ಭೂಮಿಯನ್ನು ಮತ್ತು ಪ್ರಾಣಿಗಳನ್ನು ಹೇಗೆ ಬಳಸಲ್ಪಡಬೇಕು ಎಂಬುದನ್ನು ನಿರ್ವಹಿಸಬೇಕು, ನಿರ್ದೇಶಿಸಬೇಕು ಮತ್ತು ನಿಯಂತ್ರಿಸಬೇಕು ಎಂದು ದೇವರು ಜನರಿಗೆ ಅಧಿಕಾರವನ್ನು ಮತ್ತು ದೊರೆತನವನ್ನು ಕೊಟ್ಟನು.

ಅನುವಾದದ ಪದಗಳು