kn_obs-tn/content/01/08.md

2.5 KiB
Raw Permalink Blame History

ಆರನೆಯ ದಿನ

ಇದು ದಿನಗಳ ಮತ್ತು ಸೃಷ್ಟಿಯ ಕ್ರಿಯೆಗಳ ನಿರಂತರವಾದ, ಕ್ರಮಬದ್ಧವಾದ ಕಾರ್ಯ ಪ್ರಗತಿಯ ಮುಂದಿನ ಘಟನೆಯಾಗಿದೆ.

ದೇವರು ನುಡಿದನು

ದೇವರು ನುಡಿದ ಮಾತಿನ ಮೂಲಕ ಪ್ರಾಣಿಗಳು ಸೃಷ್ಟಿಸಲ್ಪಟ್ಟವು.

ಎಲ್ಲಾ ತರದ

ಇದು ಬಹು ವೈವಿಧ್ಯತೆಯನ್ನು, ವರ್ಗವನ್ನು ಸಹ ಸೂಚಿಸುತ್ತದೆ.

ಜೀವಜಂತುಗಳು

ಹಕ್ಕಿಗಳಿಗೆ ಅಥವಾ ಸಮುದ್ರದಲ್ಲಿ ವಾಸಿಸುವ ಜೀವಜಂತುಗಳಿಗೆ ವ್ಯತಿರಿಕ್ತವಾಗಿ ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ತರದ ಪ್ರಾಣಿಯಾಗಿದೆ.

ಸಾಕುಪ್ರಾಣಿಗಳು

ಈ ತರದ ಪ್ರಾಣಿಗಳು ಸಾಮಾನ್ಯವಾಗಿ ಜನರೊಂದಿಗೆ ಶಾಂತಿಯುತವಾಗಿ ಬದುಕುತ್ತವೆ ಇವು ಪಳಗಿಸಿದ ಅಥವಾ ಸಾಕಿದ ಪ್ರಾಣಿಗಳಾಗಿವೆ.

ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳು

ಬಹುಷಃ ಇದು ಸರೀಸೃಪಗಳನ್ನು ಮತ್ತು ಕೀಟಗಳನ್ನು ಒಳಗೊಂಡಿರುತ್ತದೆ.

ಕಾಡುಪ್ರಾಣಿಗಳು

ಸಾಮಾನ್ಯವಾಗಿ ಈ ತರದ ಪ್ರಾಣಿಗಳು ಜನರೊಂದಿಗೆ ಶಾಂತಿಯುತವಾಗಿ ಬದುಕುವುದಿಲ್ಲ, ಏಕೆಂದರೆ ಸಾಮಾನ್ಯವಾಗಿ ಅವು ಜನರಿಗೆ ಭಯಪಡುತ್ತವೆ ಅಥವಾ ಅವರಿಗೆ ಅಪಾಯಕಾರಿಯಾಗಿರುತ್ತವೆ.

ಒಳ್ಳೆಯದಾಗಿತ್ತು

ದೇವರ ಜ್ಞಾನದ ಸಂಕಲ್ಪ ಮತ್ತು ಉದ್ದೇಶದ ಮೇರೆಗೆ ಪ್ರತಿಯೊಂದು ಹಂತವು ಸರಿಯಾಗಿ ನಡೆಯಿತು ಎಂಬುದನ್ನು ತೋರಿಸುವುದಕ್ಕಾಗಿ ಸೃಷ್ಟಿಯ ಕಾರ್ಯಾದಾದ್ಯಂತ ಈ ನುಡಿಗುಚ್ಛವನ್ನು ಪುನರಾವರ್ತಿಸಲಾಗಿದೆ.

ಅನುವಾದದ ಪದಗಳು