kn_obs-tn/content/01/07.md

2.5 KiB

ಐದನೆಯ ದಿನ

ದೇವರು ಹಿಂದಿನ ನಾಲ್ಕು ದಿನಗಳಲ್ಲಿ ಪ್ರಾರಂಭಿಸಿದ ತನ್ನ ಕ್ರಮಬದ್ಧವಾದ ಕಾರ್ಯದ ಪ್ರಗತಿಯನ್ನು ಆತನು ಮುಂದುವರಿಸಿದನು.

ದೇವರು ನುಡಿದನು

ದೇವರು ಆಜ್ಞೆಯನ್ನು ನುಡಿಯುವುದರ ಮೂಲಕ ಪಕ್ಷಿಗಳನ್ನು ಮತ್ತು ಜಲಜಂತುಗಳನ್ನು ಸೃಷ್ಟಿಸಿದನು.

ನೀರಿನಲ್ಲಿ ಜೀವಿಸುವ ಎಲ್ಲಾ ಜಲಚರಗಳು

ದೇವರು ಮೀನುಗಳನ್ನು ಮಾತ್ರ ಉಂಟುಮಾಡಲಿಲ್ಲ, ಆದರೆ ನೀರಿನಲ್ಲಿ ವಾಸಿಸುವ ಎಲ್ಲಾ ರೀತಿಯ ಜೀವಜಂತುಗಳನ್ನೂ ಉಂಟುಮಾಡಿದನು. ಪ್ರತಿಯೊಂದು ಉಂಟಾಯಿತು ಏಕೆಂದರೆ ದೇವರು ಅದನ್ನು ಸೃಷ್ಟಿಸಲು ನಿರ್ಧರಿಸಿದ್ದನು.

ಎಲ್ಲಾ ಪಕ್ಷಿಗಳು

ದೇವರು ಕೇವಲ ಒಂದು ರೀತಿಯ ಪಕ್ಷಿಯನ್ನು ಮಾತ್ರ ಉಂಟುಮಾಡಲಿಲ್ಲ, ಆದರೆ ಆಶ್ಚರ್ಯಕರವಾಗಿರುವಂಥ ಎಲ್ಲಾ ರೀತಿಯ ಆಕಾರಗಳ, ಗಾತ್ರಗಳ, ಬಣ್ಣಗಳ ಮತ್ತು ವಿಧಗಳ ಪಕ್ಷಿಗಳನ್ನೂ ಉಂಟುಮಾಡಿದನು.

ಒಳ್ಳೆಯದಾಗಿತ್ತು

ದೇವರ ಜ್ಞಾನದ ಸಂಕಲ್ಪ ಮತ್ತು ಉದ್ದೇಶದ ಮೇರೆಗೆ ಪ್ರತಿಯೊಂದು ಹಂತವೂ ಸರಿಯಾಗಿ ನಡೆಯಿತು ಎಂಬುದನ್ನು ತೋರಿಸುವುದಕ್ಕಾಗಿ ಸೃಷ್ಟಿಯ ಕಾರ್ಯಾದಾದ್ಯಂತ ಈ ನುಡಿಗಟ್ಟನ್ನು ಪುನರಾವರ್ತಿಸಲಾಗಿದೆ.

ಅವುಗಳನ್ನು ಆಶೀರ್ವದಿಸಿದನು

ಅವುಗಳು ಅಭಿವೃದ್ಧಿಯಾಗಲಿ ಮತ್ತು ಆತನು ಅವುಗಳನ್ನು ಇರಿಸಿರುವ ಲೋಕದಲ್ಲಿ ಅವುಗಳಿಗೆ ಒಳ್ಳೆಯದಾಗಲಿ ಎಂಬ ತನ್ನ ಬಯಕೆಯನ್ನು ದೇವರು ತಿಳಿಸಿದನು

ಅನುವಾದದ ಪದಗಳು