kn_obs-tn/content/01/02.md

2.1 KiB

ದೇವರು ಹೇಳಿದನು

ದೇವರು ಸರಳವಾದ ಆಜ್ಞೆಯ ಮೂಲಕ ಬೆಳಕನ್ನು ಸೃಷ್ಟಿಸಿದನು.

ಬೆಳಕಾಗಲಿ

ಇದು ದೇವರಿಂದ ನುಡಿಯಲ್ಪಟ್ಟ ಕಾರಣ ತಕ್ಷಣವೇ ಸಂಭವಿಸಿದ ಕಾರ್ಯವಾಗಿದೆ. ಇದನ್ನು ಸಹಜವಾದ ಹೇಳಿಕೆಯಾಗಿ ಅನುವಾದಿಸಿದರೆ ಹೆಚ್ಚು ನೈಜವಾಗಿರುತ್ತದೆ , ಏಕೆಂದರೆ ಇದು ನಿಶ್ಚಿತವಾಗಿ ಸಂಭವಿಸುವಂಥದ್ದಾಗಿದೆ. ಉದಾಹರಣೆಗೆ ನೀವು ಇದನ್ನು, " 'ಬೆಳಕು ಉಂಟಾಗಲಿ' ಎಂದು ಹೇಳಿದನು" ಎಂದು ಅನುವಾದಿಸಬಹುದು.

ಬೆಳಕು

ಇದು ದೇವರು ಸೃಷ್ಟಿಸಿದ ವಿಶೇಷವಾದ ಬೆಳಕಾಗಿತ್ತು, ಅದುವರೆಗೂ ಸೂರ್ಯನು ಸೃಷ್ಟಿಸಲ್ಪಟ್ಟಿರಲಿಲ್ಲ.

ಅದು ಒಳ್ಳೆಯದಾಗಿತ್ತು

ಸೃಷ್ಟಿಯ ಕಥೆಯಲ್ಲಿ ಈ ನುಡಿಗಟ್ಟು ಅನೇಕಸಾರಿ ಪುನರಾವರ್ತಿತವಾಗಿದೆ ಮತ್ತು ಸೃಷ್ಟಿಯ ಪ್ರತಿಯೊಂದು ಹಂತವು ದೇವರಿಗೆ ಮೆಚ್ಚಿಕೆಯಾಗಿತ್ತು ಆತನ ಸಂಕಲ್ಪವನ್ನು ಮತ್ತು ಉದ್ದೇಶವನ್ನು ನೆರವೇರಿಸಿತು ಎಂಬುದನ್ನು ಇದು ಒತ್ತಿಹೇಳುತ್ತದೆ.

ಸೃಷ್ಟಿ

ಅಸ್ತಿತ್ವದಲ್ಲಿರುವ ಎಲ್ಲವನ್ನೂ ದೇವರು ಆರು ದಿನಗಳ ಕಾಲಾವಧಿಯಲ್ಲಿ ಉಂಟುಮಾಡಿದ್ದಾನೆ ಎಂದು ಸೂಚಿಸಲು ಈ ಪದವನ್ನು ಇಲ್ಲಿ ಬಳಸಲಾಗಿದೆ.

ಅನುವಾದದ ಪದಗಳು