kn_obs-tn/content/01/01.md

2.2 KiB

ಆರಂಭ

"ಸರ್ವ ವಿಷಯಗಳ ಆರಂಭ ಅಥವಾ ಆದಿ " ಅಂದರೆ ದೇವರನ್ನು ಹೊರತುಪಡಿಸಿ ಬೇರೆಲ್ಲವು ಉಂಟಾಗುವುದಕ್ಕಿಂತ ಮೋದಲ ಕಾಲ.

ಸೃಷ್ಟಿಸಿದನು

ಶೂನ್ಯದಿಂದ ಯಾವುದೋ ಒಂದನ್ನು ಉಂಟುಮಾಡುವ ಅರ್ಥದಲ್ಲಿ ಇದನ್ನು ಇಲ್ಲಿ ಬಳಸಲಾಗಿದೆ.

ವಿಶ್ವ

ದೇವರು ಭೂಮಿಯ ಮೇಲೆ ಮತ್ತು ಆಕಾಶದಲ್ಲಿ ಸೃಷ್ಟಿಸಿದ ಎಲ್ಲವನ್ನೂ ಅಂದರೆ ದೃಶ್ಯ ಮತ್ತು ಅದೃಶ್ಯವಾದ ವಸ್ತುಗಳೆರಡನ್ನೂ ಇದು ಒಳಗೊಂಡಿದೆ.

ಭೂಮಿ

"ಭೂಮಿ" ಎಂಬ ಪದವು ಜನರು ವಾಸಿಸುವ ಇಡೀ ಜಗತ್ತನ್ನು ಸೂಚಿಸುತ್ತದೆ.

ಕತ್ತಲು

ಅದು ಸಂಪೂರ್ಣವಾಗಿ ಕತ್ತಲಾಗಿತ್ತು. ದೇವರು ಇನ್ನೂ ಬೆಳಕನ್ನು ಸೃಷ್ಟಿಸದ ಕಾರಣ ಅಲ್ಲಿ ಬೆಳಕು ಇರಲಿಲ್ಲ.

ಬರಿದಾದ/ಖಾಲಿಯಾದ

ನೀರಿನಿಂದ ಆವೃತವಾಗಿದ್ದ ಬರಿದಾದ ಭೂಮಿಯನ್ನು ಹೊರತುಪಡಿಸಿ ಬೇರೆ ಯಾವುದನ್ನೂ ದೇವರು ಇನ್ನೂ ಸೃಷ್ಟಿಸಿರಲಿಲ್ಲ.

ಯಾವುದನ್ನೂ ಉಂಟುಮಾಡಿರಲಿಲ್ಲ

ಯಾವುದೇ ವಿಶಿಷ್ಟ ಲಕ್ಷಣಗಳು ಇಲ್ಲದೆ, ನೀರು ಎಲ್ಲವನ್ನು ಆವರಿಸಿತು.

ದೇವರ ಆತ್ಮನು

ಪವಿತ್ರಾತ್ಮನು ಎಂದು ಕೆಲವೊಮ್ಮೆ ಕರೆಯಲ್ಪಡುವ ದೇವರ ಆತ್ಮನು, ಆದಿಯಲ್ಲಿ ಇದ್ದನು, ಆತನು ಸಂಕಲ್ಪಿಸಿರುವ ಎಲ್ಲವನ್ನೂ ಸೃಷ್ಟಿಸಲು ಭೂಮಿಯ ಮೇಲೆ ಸರಾಗವಾಗಿ ಚಲಿಸುತ್ತಿದ್ದನು.

ಅನುವಾದದ ಪದಗಳು